ಬಹಳಷ್ಟು ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸ್ ಅಂದ್ರೆ ಭಯ, ಯಾಕೆಂದರೆ ಯಾವಾಗ ನಮ್ಮ ವಾಹನಗಳನ್ನು ತಡಿತಾರೋ, ಎಷ್ಟು ದಂಡ ಹಾಕ್ತಾರೋ ಅನ್ನೋದೇ ಭಯ ಆದ್ದರಿಂದ ನಾವು ಟ್ರಾಫಿಕ್ ನಿಯಮಗಳನ್ನು ತಿಳಿದಿದ್ದರೆ ಅಂತಹ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಬಹುದು ನೋಡಿ.

ಸಂಚಾರಿ ಪೊಲೀಸ್ ನಿಮ್ಮನ್ನು ಹೆಲ್ಮೆಟ್, ಲೈಸೆನ್ಸ್, ಇನ್ಸೂರೆನ್ಸ್ ಮತ್ತು ವಾಹನದ ದಾಖಲಾತಿಗಳನ್ನು ಕೇಳಿ ಪರಿಶೀಲಿಸಬೇಕು ಅಷ್ಟೇ ಯಾವುದೇ ಕಾರಣ ಜಪ್ತಿ ಮಾಡಿಕೊಳ್ಳುವಂತಿಲ್ಲ , ಒಂದು ವೇಳೆ ಜಪ್ತಿ ಮಾಡಿದಲ್ಲಿ ಅದು ಮೋಟಾರು ವೆಹಿಕಲ್ ಕಾಯ್ದೆ (ಆಕ್ಟ್ ೧೩೦)ಪ್ರಕಾರ ಅದು ಕಾನೂನು ಬಾಹಿರ ಆದ್ದರಿಂದ ನೀವು ಆ ಪೊಲೀಸ್ ಅವರ ಹೆಸರು ಮತ್ತು ಅವರ ಬಕ್ಕಲ್ ನಂಬರನ್ನು ತೆಗೆದುಕೊಂಡು ಕಾನೂನು ಹೋರಾಟ ಮಾಡಬಹುದು.

ಸಂಚಾರಿ ಪೊಲೀಸ್ ರವರು ನಿಮ್ಮ ವಾಹನ ತಡೆದು ದಾಖಲಾತಿ ಕೇಳಿದಾಗ ಇಲ್ಲದೆ ಹೋದರೆ ಯಾವುದೇ ತಕರಾರು ಮಾಡದೇ ದಂಡ ಪಾವತಿಸಿ ಅದಕ್ಕೆ ಅವರಿಂದ ಅಧಿಕೃತ ರಸೀದಿಯನ್ನು ತಪ್ಪದೆ ಪಡೆಯಿರಿ.

ನೀವು ನಿಮ್ಮ ವಾಹನದಲ್ಲಿ ಚಾಲನೆ ಮಾಡುವಾಗ ಸಂಚಾರಿ ಪೊಲೀಸ್ನವ್ರು ತಡೆದು ವಾಹನದ ಕೀ ತೆಗೆದು ಕೊಳ್ಳುವಂತಿಲ್ಲ, ಮತ್ತು ಹೆಲ್ಮೆಟ್ ಅಥವಾ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿದಾಗ ಬಿಲ್ ಬುಕ್ ಅಥವಾ ಮಿಷಿನ್ ಇಲ್ಲದೆ ಹಣ ಪಡೆಯುವಂತಿಲ್ಲ.

ಒಂದು ವೇಳೆ ನಿಮ್ಮನ್ನು ಪೊಲೀಸ್ ನವರು ಯಾವುದೊ ಒಂದು ಕೇಸ್ನಲ್ಲಿ ನಿಮ್ಮನ್ನು ಅರೆಸ್ಟ್ ಮಾಡಿದರೆ ಅರೆಸ್ಟ್ ಮಾಡಿದ 24 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಿ ಪಡಿಸಬೇಕು.

ನಿಮ್ಮನು ಸಂಚಾರಿ ಪೊಲೀಸ್ ಮೋಟಾರ್ ವೆಹಿಕಲ್ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಕೇಸ್ ದಾಖಲಿಸಿ, ಕೋರ್ಟ್ ನಲ್ಲಿ ದಂಡ ಪಾವತಿಸಿದರೆ ರಶೀದಿಯಲ್ಲಿ ನಿಮ್ಮ ಹೆಸರು ಮತ್ತು ಕೋರ್ಟ್ ವಿವರ , ದಿನಾಂಕ , ವಾಹನ ಸಂಖ್ಯೆ , ನಿಮ್ಮ ಹೆಸರು ಮತ್ತು ವಿಳಾಸ , ಜಪ್ತಿ ಮಾಡಿದ ದಾಖಲಾತಿ ವಿವರ ಮತ್ತು ಚಾಲನಾಧಿಕಾರಿ ಸಹಿತ ಸಂಪೂರ್ಣ ವಿವರ ಇರಬೇಕು.

ಹೀಗೆ ನೀವು ಸಂಚಾರಿ ನಿಯಮಗಳ ಬಗ್ಗೆ ಜಾಗೃತರಾಗಿದ್ದರೆ ನೀವು ಪೊಲೀಸ್ ಗೆ ನಿಯಮ ಉಲ್ಲಂಘಿಸಿ ದಂಡ ಪಾವತಿ ಮಾಡುವುದು ತಪ್ಪುತ್ತದೆ ಮತ್ತು ನಿಮ್ಮ ಸಮಯವೂ ಸಹ ಉಳಿಯುತ್ತದೆ.ನೀವು ಮೋಟಾರ್ ವೆಹಿಕಲ್ ಕಾಯ್ದೆಯನ್ನು ತಿಳಿದುಕೊಂಡರೆ ಇವೆಲ್ಲ ಸಮಸ್ಯೆಗಳಿಂದ ದೂರವಿರಬಹುದು.

LEAVE A REPLY

Please enter your comment!
Please enter your name here