ಬಹಳಷ್ಟು ಜನಕ್ಕೆ ಮಾತ್ರೆಯನ್ನು ಯಾವ ರೀತಿಯಲ್ಲಿ ಸೇವಿಸಬೇಕು ಎಂಬುದು ತಿಳಿದಿರುತ್ತದೆ ಆದ್ರೆ ಕೆಲವರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ದೇಹಕ್ಕೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಕಾಳಿ ಹೊಟ್ಟೆಗೆ ಮಾತ್ರೆಗಳನ್ನು ಸೇವಿಸಬಾರದು. ಮತ್ತೆ ಒಂದೇ ಬಾರಿಗೆ ಎರಡು ಮಾತ್ರೆಯನ್ನು ಸೇವಿಸಿದರೆ ಹೃದಯಾಘಾತವಾಗುತ್ತೆ ಅನ್ನೋದನ್ನ ತಿಳಿಯಲಾಗಿದೆ ಹಾಗಾಗಿ ಮಾತ್ರೆ ಸೇವನೆ ಮಾಡುವವರು ಇದನ್ನು ತಿಳಿಯುವುದು ಸೂಕ್ತ.

ಮನುಷ್ಯನ ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಬಹಳ ಮುಖ್ಯ. ಹೀಗಾಗಿ ಉತ್ತಮ ಆರೋಗ್ಯ ಮತ್ತು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ವಿಟಮಿನ್ ಡಿ ನಮ್ಮ ಕರುಳು, ಮೂಳೆಗಳು, ಪ್ಯಾರಾಥೈರಾಯ್ಡ್ ಗ್ರಂಥಿ, ಚರ್ಮ ಮತ್ತು ಕೂದಲು ಕೋಶಗಳು, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ.

ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರೆಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯಾಘಾತದ ಸಾಧ್ಯತೆ ಹೆಚ್ಚು ಎಂಬ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.

ದಿ ಎನಲ್ಸ್ ಆಫ್ ಇಂಟರ್ನ್ಯಾಷನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿ ಪ್ರಕಾರ, ಈ ಎರಡು ಮಾತ್ರೆಗಳು ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದು ಪತ್ತೆ ಹಚ್ಚಲಾಗಿದೆ. ಈ ವಿಟಮಿನ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಜೊತೆಯಾಗಿ ಸೇವಿಸುವುದರಿಂದ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ಒಟ್ಟಿಗೆ ಒಂದೇ ಸಮಯದ ವೇಳ ತಿಂದರೆ ಹೃದಯಾಘಾತದ ಅಪಾಯವನ್ನು ಶೇಕಡಾ 17 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನಾ ಫಲಿತಾಂಶಗಳು ಸೂಚಿಸಿವೆ.

2012 ರ ವರ್ಷದಲ್ಲಿ, ಜರ್ಮನಿಯ ಕೆಲವು ಸಂಶೋಧಕರು ಕ್ಯಾಲ್ಸಿಯಂಗಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಜನರಿಗೆ ಹೃದಯಾಘಾತದ ಅಪಾಯವಿದೆ ಎಂದು ವರದಿ ಮಾಡಿದ್ದರು. ಕ್ಯಾಲ್ಸಿಯಂ ಮಾತ್ರೆಗಳನ್ನು ತಿನ್ನುವುದಕ್ಕಿಂತ ಕ್ಯಾಲ್ಸಿಯಂ ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ ಎಂದು ಅಧ್ಯಯನ ತಂಡ ಶಿಫಾರಸ್ಸು ಮಾಡಿತ್ತು.

ಇದೀಗ ಮತ್ತೊಮ್ಮೆ ಈ ವಿಟಮಿನ್-ಕ್ಯಾಲ್ಸಿಯಂ ಮಾತ್ರೆಗಳಿಂದ ಹೃದಯಾಘಾತ ಅಪಾಯವಿದೆ ಎಂದು ವರದಿಯಾಗಿದೆ. ಇನ್ನು ವಿಟಮಿನ್ ಡಿ ಮಾತ್ರೆಗಳ ಅತಿಯಾದ ಬಳಕೆಯು ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಈ ಸ್ಥಿತಿಯನ್ನು ಹೈಪರ್‌ಕೆಲೆಮೊಶಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಕಾಣಿಸಿಕೊಂಡರೆ ನಿಮ್ಮ ಮೂತ್ರಪಿಂಡ ವೈಫಲ್ಯವಾಗುತ್ತದೆ ಎಂದು ವೈದ್ಯಲೋಕ ಎಚ್ಚರಿಸಿದೆ.

LEAVE A REPLY

Please enter your comment!
Please enter your name here