ಯಾರ ಅದೃಷ್ಟ ಹೇಗೆ ಇರುತ್ತೆ ಅನ್ನೋದನ್ನ ಹೇಳಲು ಆಗೋದಿಲ್ಲ, ಆದ್ರೆ ಇಲ್ಲಬ್ಬ ಭಾರತೀಯ ರೈತ ಕೆಲಸ ಇಲ್ಲದೆ ದುಬೈಗೆ ಕೆಲಸ ಹುಡುಕಿಕೊಂಡು ಹೋಗಿರುತ್ತಾನೆ ಆದ್ರೆ ಅಲ್ಲೂ ಕೂಡ ಉದ್ಯೋಗ ಹೊಂದದ ಕಾರಣ ಮರಳಿ ಭಾರತಕ್ಕೆ ಬಂದಿರುತ್ತಾನೆ ಆದ್ರೆ ದುಬೈಗೆ ಹೋಗಿದ್ದಾಗ ಲಾಟರಿ ಖರೀದಿ ಮಾಡಿರುತ್ತಾರೆ ಅದು ಈಗ ಈ ರೈತನಿಗೆ ಅದೃಷ್ಟದ ಬಾಗಿಲನ್ನು ತೆರೆದಿದೆ.

ಹೈದರಾಬಾದ್‌ ನಿವಾಸಿಯಾದ ವಿಲಾಸ್‌ ರಿಕ್ಕಾಲಾ ಎನ್ನುವವರು ದುಬೈನಿಂದ ನಾಲ್ಕು ದಿನಗಳ ಹಿಂದೆ ತವರಿಗೆ ಮರಳಿದ್ದರು. ಉದ್ಯೋಗ ಹುಡುಕಲು ವಿಫಲವಾಗಿದ್ದರಿಂದ ಪತ್ನಿಯಿಂದ 20 ಸಾವಿರ ರು. ಪಡೆದು ಸ್ನೇಹಿತ ರವಿ ಎಂಬಾತನಿಗೆ ನೀಡಿದ್ದರು. ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ರವಿ, ರಿಕ್ಕಾಲಾ ಹೆಸರಿನಲ್ಲಿ ಮೂರು ಲಾಟರಿ ಟಿಕೆಟ್‌ಗಳನ್ನು ಪಡೆದಿದ್ದ. ಶನಿವಾರದಂದು ಲಾಟರಿ ಗೆದ್ದಿರುವ ಬಗ್ಗೆ ಯುಎಇಯ ಬಿಗ್‌ ಟಿಕೆಟ್‌ ಲಾಟರಿ ಸಂಸ್ಥೆ ರಿಕ್ಕಾಲಾಗೆ ಮಾಹಿತಿ ನೀಡಿದೆ.

ಈ ಹಿಂದೆ ದುಬೈನಲ್ಲಿ ಕಾರು ಚಾಲಕನಾಗಿ ಕಾರ್ಯನಿರ್ವಹಿಸಿದ್ದ ರಿಕ್ಕಾಲಾ ಎರಡು ವರ್ಷಗಳ ಕಾಲ ವಿವಿಧ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಆದರೆ, ಒಮ್ಮೆಯೂ ಅದೃಷ್ಟ ಒಲಿದಿರಲಿಲ್ಲ. ಎಂಬುದಾಗಿ ವ್ಯಕ್ತಿ ಹೇಳಿದ್ದಾರೆ. ಅದೇನೇ ಇರಲಿ ಈ ವ್ಯಕ್ತಿಗೆ ಅದೃಷ್ಟದ ಬಾಗಿಲು ತೆರೆದಿರುವಂತದ್ದು ನಿಜ.

LEAVE A REPLY

Please enter your comment!
Please enter your name here