ಮನೆಯಲ್ಲಿ ಬಳಸುವಂತ ಸಾಕಷ್ಟು ಪದಾರ್ಥಗಳು ಹಲವು ರೋಗಗಳ ನಿವಾರಣೆಯನ್ನು ಮಾಡಬಲ್ಲದು, ಸಾಸುವೆ ಅಡುಗೆಗೆ ಅಷ್ಟೇ ಅಲ್ಲದೆ ಹಲವು ರೀತಿಯ ಚರ್ಮ ರೋಗಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಚರ್ಮ ರೋಗಗಳ ನಿವಾರಕ ಈ ಸಾಸುವೆ ಸೌಂದರ್ಯಕ್ಕೂ ಹೆಚ್ಚು ಉಪಯೋಗಕಾರಿ ಅನ್ನೋದನ್ನ ತಿಳಿಯಲಾಗಿದೆ.

ಸಾಸಿವೆ ಕ್ರ್ರ್ಮ ರೋಗವನ್ನು ಹೋಗಲಾಡಿಸುತ್ತದೆ ಅಷ್ಟೇ ಅಲ್ಲದೆ ಬಣ್ಣವನ್ನು ನೀಡುತ್ತದೆ, ಬಿಳಿಯ ಸಾಸಿವೆಯೂ ಸೌಂಡೇರ ಸಾಧನಗಳಲ್ಲೇ ಮುಖ್ಯವಾದ ಪದಾರ್ಥವಾಗಿದೆ. ತೆಂಗಿನ ಎಣ್ಣೆಯಲ್ಲಾಗಲಿ, ಎಳ್ಳೆಣ್ಣೆಯಲ್ಲಾಗಲಿ ಬಿಳಿಯ ಸಾಸಿವೆಯನ್ನು ಚನ್ನಾಗಿ ಹುರಿದು ಆ ಎಣ್ಣೆಯನ್ನು ಸೋಸಿ ಶೀಶೆಯಲ್ಲಿ ತುಂಬಿಡಿ. ದಿನವೂ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡರೆ ಮೋಡದ ಮೇಲಿನ ಮೊಡವೆ ಕಡಿಮೆಯಾಗಿ ಮುಖ ಹೆಚ್ಚು ಕಾಂತೀಯತೆ ಪಡೆಯುತ್ತದೆ.

ಚರ್ಮ ರೋಗಗಕ್ಕೆ ಸಂಬಂದಿಸಿದ ಈ ರೋಗಗಳಿಗೆ ಕುಷ್ಠರೋಗ, ಕಜ್ಜಿ, ಹುಳುಕಡ್ಡಿ, ಬೆವರುಸಾಲೆ ಮುಂತಾದ ಚರ್ಮ ರೋಗಗಳ ನಿವಾರಣೆಗೆ ಸಾಸಿವೆಯನ್ನು ನುಣ್ಣಗೆ ಅರೆದು ದೇಹಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದರೆ ಈ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದೆ.

ತಲೆಯಲ್ಲಿರುವ ಹೇನುಗಳ ನಿವಾರಣೆಗೆ ಸಾಸಿವೆ ಕಾಲನ್ನು ಅರೆದು ತಲೆಗೆ ಹಚ್ಚಿಕೊಂಡರೆ ತಲೆಯಲ್ಲಿರುವ ಹೇನುಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ತಲೆ ಕೂದಲು ಸೊಂಪಾಗಿ ಬೆಳೆಯಲು ಸಾಸಿವೆ ಎಣ್ಣೆಯಲ್ಲಿ ಗೋರಂಟಿ ಎಲೆಯನ್ನು ಹಾಕಿ ಚನ್ನಾಗಿ ಕುದಿಸಿ ಅದು ತಣ್ಣಗಾದ ನಂತರ ಒಂದು ಶೀಶೆಯಲ್ಲಿ ಹಾಕಿಟ್ಟುಕೊಂಡು ತಲೆಸ್ನಾನ ಮಾಡುವಾಗ ಬಳಸಿದರೆ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ.

ಚರ್ಮ ಕಾಂತಿಯು ಪಡೆಯಲು ಉತ್ತರ ಭಾರತೀಯರು ಈ ರೀತಿಯಾಗಿ ಮಾಡುತ್ತಾರೆ, ಸಾಸಿವೆ ಎಣ್ಣೆಗೆ ಅರಿಶಿನವನ್ನು ಬೆರಸಿ ಆ ಮಿಶ್ರಣವನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ. ಹೆಚ್ಚಾಗಿ ಶೀತ ಪ್ರದೇಶದಲ್ಲಿ ವಾಸಿಸುವವರು ಇದನ್ನು ಅನುಸರಿಸುತ್ತಾರೆ.

ಚರ್ಮಕ್ಕೆ ಸಂಅಬಂದಿಸಿದ ಅಲರ್ಜಿಗಳಿಗೆ: ತುರಿಕೆ, ದದ್ದು ಇತರೆ ಸಮಸ್ಯೆಗಳಿಗೆ ಆಹಾರಗಳಲ್ಲಿ ಸಾಸಿವೆ ಎಣ್ಣೆಯನ್ನು ಬಳಸಿದರೆ ನಿವಾರಣೆಯಾಗುವುದು. ಅಷ್ಟೇ ಅಲ್ದೆ ವೃಷಣದಲ್ಲಿ ಕಾಣಿಸುವಂತ ನೋವು ನಿವಾರಣೆಗೆ ಸಾಸಿವೆಯನ್ನು ಅರೆದು ಪಟ್ಟಿ ಹಾಕಿದರೆ ನೋವು ನಿವಾರಣೆ ಆಗುವುದು.

ಚರ್ಮ ರೋಗಗಳಲ್ಲಿ ಕಾಣಿಸಿಕೊಳ್ಳುವಂತ ಹುಳುಕಡ್ಡಿ ಸಮಸ್ಯೆಗೆ ಸಾಸುವೆಯನ್ನು ಪೇಸ್ಟ್ ನಂತೆ ಮಾಡಿ ಹುಳುಕಡ್ಡಿ ಬಂದ ಜಗದಲ್ಲಿ ಹಚ್ಚಿದರೆ ಆ ರೋಗದಲ್ಲಿ ಉಪಶಮನ ಕಾಣಬಹುದು. ಒಟ್ಟಾರೆ ಸಾಸಿವೆ ಮನೆಯಲ್ಲಿದ್ದರೆ ಎಷ್ಟೆಲ್ಲ ಸಮಸ್ಯೆಗೆ ಪರಿಹಾರವನ್ನು ಕಾಣಬಹುದು ಅನ್ನೋದನ್ನ ತಿಳಿಯಲಾಗಿದೆ.

LEAVE A REPLY

Please enter your comment!
Please enter your name here