2019 ರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಫೈನಲ್ ಗೆಲ್ಲಲಿದೆ ಅನ್ನೋ ಭಾವನೆ ಪ್ರತಿ ಭಾರತೀಯ ಅಭಿಮಾನಿಗಳ ಮನದಲ್ಲಿ ಉಳಿದಿದಂತೂ ನಿಜ ಆದ್ರೆ, ಇವೆಲ್ಲಕ್ಕೂ ನೆನ್ನೆ ನಡೆದ ಪಂದ್ಯ ಟೂರ್ನಿ ಗೆಲ್ಲುವ ಕನಸನ್ನು ಭಗ್ನ ಮಾಡಿದೆ. ನ್ಯೂಜಿಲೆಂಡ್ ಹಾಗೂ ಭಾರತ ಸೆಮಿ ಫೈನಲ್ ಆಡಲು ಮುಂದಾಗಿದ್ದು, 240 ರನ್ ಗಳ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ಇಂಡಿಯಾಗೆ ಕೊಟ್ಟಿತ್ತು ಆದ್ರೆ ಅಂದು ಮಳೆ ಬಂದ ಕಾರಣ ಪಂದ್ಯ ಮರುದಿನ ನಡೆಯಿತು.

240 ರ ಗುರಿಯನ್ನು ಮುಟ್ಟಲು ಇಂಡಿಯಾದ ಆಟಗಾರರು ಬಲು ಕಷ್ಟ ಪಡಬೇಕಾಯಿತು, ಆರಂಭದಲ್ಲಿ 6 ರನ್ಗಳ ಗಳಿಕೆಯಲ್ಲಿ3 ವಿಕೆಟ್ ಕಳೆದುಕೊಂಡು ಕಷ್ಟಕ್ಕೆ ಸಿಲುಕಿದ ಇಂಡಿಯಾಗೆ ಜಡೇಜಾ ಹಾಗೂ ದೋನಿಯ ಜೊತೆಯಾಟದಿಂದ ಗೆಲುವಿನ ಹಾದಿ ಕಡೆ ಬರುವಂತೆ ಮಾಡಿತು ಆದ್ರೆ ಜಡೇಜಾ ಔಟ್ ಆದ ಬಳಿಕ ಮತ್ತೆ ಸೋಲಿನ ಕೈಗೆ ಸೇರಿತು ಟೀಮ್ ಇಂಡಿಯಾ. 18 ರನ್ಗಳ ಅಂತರದಲ್ಲಿ ನ್ಯೂಜಿಲೆಂಡ್ ಗೆಲುವನ್ನು ಸಾಧಿಸಿತು.

ಟೀಮ್ ಇಂಡಿಯಾದ ಸೋಲಿನಿಂದ ಹಲವು ಅಭಿಮಾನಿಗಳ ಕಣ್ಣಲ್ಲಿನೀರು ಬಂದಿದಂತೂ ನಿಜ, ಈ ಸೋಲಿನ ಬಗ್ಗೆ ನರೇಂದ್ರ ಮೋದಿಯವರು ಹೇಳಿದ್ದು ಹೀಗೆ, ಸೋಲು ಗೆಲುವು ಜೀವನದ ಒಂದು ಭಾಗ ಎಂದು ಹೇಳಿಸುವ ಪ್ರಧಾನಿಗಳು ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಸೋಲಿನ ಬಗ್ಗೆ ಟ್ವಿಟ್ ಮಾಡಿರುವ ಮೋದಿಯವರು ಈ ರೀತಿ ಹೇಳಿದ್ದಾರೆ, ಆಟಗಾರರ ಕಠಿಣ ಶ್ರಮವನ್ನು ಪ್ರಶಂಸಿರುವ ಮೋದಿ ಅವರು, ಇಂದಿನ ಪಂದ್ಯದಲ್ಲಿ ಬೇಸರದ ಫಲಿತಾಂಶ ಲಭಿಸಿದೆ. ಆದರೆ ಪಂದ್ಯದ ಅಂತಿಮ ಕ್ಷಣದವರೆಗೂ ಆಟಗಾರರು ತೋರಿದ ಹೋರಾಟ ಸ್ಫೂರ್ತಿ ನೀಡುತ್ತದೆ. ಇಡೀ ಟೂರ್ನಿಯಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹೆಮ್ಮೆ ಎನಿಸಿದೆ. ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಶುಭವಾಗಲಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here