ಮಹಿಳೆಯರಿಗೆ ಅವರ ತುಟಿಗಳನ್ನ ಅಂದವಾಗಿ ಕಾಣುವಂತೆ ಮಾಡಿಕೊಳ್ಳಲು ಬಹಳ ಬಯಕೆ. ಆದರೆ ಅದಕ್ಕಾಗಿ ಹಲವಾರು ರಾಸಾಯನಿಕಗಳನ್ನ ಬಳಸುತ್ತಾರೆ. ಆದರೆ ಅವುಗಳಿಂದ ಅಂದವಾಗಿ ಕಾಣುವುದು ಕೆಲವ ತಾತ್ಕಾಲಿಕವಾಗಿ ಮಾತ್ರ. ಇವುಗಳಿಂದ ಹಾನಿಯಾಗುವುದೇ ಹೆಚ್ಚು. ಇಂತಹ ಹನಿಗಳಿಂದ ದೂರವಿರಲು ಆದಷ್ಟು ಮಟ್ಟಿಗೆ ನೈಸರ್ಗಿಕ ಸೌಂದರ್ಯವರ್ಧಕಗಳನ್ನೇ ಬಳಸುವುದು ಉತ್ತಮ.

ತುಟಿಗಳ ಅಂದವನ್ನ ಹೆಚ್ಚಿಸಲು, ತುಟಿಗಳು ಮೃದುವಾಗಿ ಕಾಣುವಂತೆ ಮಾಡಲು ನಾವು ನಿವವೆಲ್ಲರು ತುಟಿಗಳಿಗೆ ಲಿಪ್ ಬಾಮ್ ಗಳನ್ನ ಹಚ್ಚುತ್ತೇವೆ. ಆದರೆ ಲಿಪ್ ಬಾಮ್ ಬಳಸುವುದರಿಂದ. ತುಟಿಗಳ ಅಂದ ಹಾಳಾಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.

ಪದೇ ಪದೇ ಲಿಪ್ ಬಾಮ್ ಹಚ್ಚಿಕೊಳ್ಳುವುದರಿಂದ ತುಟಿ ಮತ್ತಷ್ಟು ಹಾಳಾಗುತ್ತದೆ. ಲಿಪ್ ಬಾಮ್ ಗೆ ಹಾಕುವ ರಾಸಾಯನಿಕ, ತುಟಿಗಳ ಸೌಂದರ್ಯವನ್ನು ಹದಗೆಡಿಸುತ್ತದೆ. ಲಿಪ್ ಬಾಮ್ ನಲ್ಲಿ ಮೆಂತಾಲ್ ಅಂಶ ಜಾಸ್ತಿಯಿದ್ದಲ್ಲಿ ಅದು ಮತ್ತಷ್ಟು ಅಪಾಯಕಾರಿ. ಪದೇ ಪದೇ ಲಿಪ್ ಬಾಮ್ ಬಳಸುವವರ ತುಟಿ ಮತ್ತಷ್ಟು ಬಿರುಕು ಬಿಡುತ್ತದೆ. ಲಿಪ್ ಬಾಮ್ ತುಟಿಗಳ ಅಲರ್ಜಿಗೆ ಕಾರಣವಾಗುತ್ತದೆ. ಪರಿಮಳಕ್ಕಾಗಿ ಲಿಪ್ ಬಾಮ್ ಗೆ ಬಳಸುವ ಕೆಮಿಕಲ್ ಅಲರ್ಜಿ ಸಮಸ್ಯೆಯನ್ನುಂಟು ಮಾಡುತ್ತದೆ. ಇದ್ರ ಬದಲು ಮನೆ ಮದ್ದು ಬಳಸಿ ಹೊಳಪಿನ ಹಾಗೂ ಮೃದುವಾದ ತುಟಿ ಪಡೆಯುವುದು ಒಳ್ಳೆಯದು.

LEAVE A REPLY

Please enter your comment!
Please enter your name here