ಮದುವೆ ಸಮಾರಂಭಗಳಲ್ಲಿ ಮದರಂಗಿ ವಿಶೇಷ ಸ್ಥಾನಮಾನ ಪಡೆದಿದೆ. ಮದುವೆಯಲ್ಲಿ ಮೆಹಂದಿ ಕಾರ್ಯಕ್ರಮವನ್ನ ವಿಶೇಷವಾಗಿ ಮಾಡುತ್ತಾರೆ. ಮದುವೆಗೆ ಮಾತ್ರವಲ್ಲದೆ ಹಲವು ವಿಶೇಷ ಸಂದರ್ಭಗಳಲ್ಲಿ ಮೆಹೆಂದಿಯನ್ನ ಹಾಕಿಕೊಳ್ಳುತ್ತಾರೆ. ಇದರಿಂದ ಕೈಗಳ ಅಂದ ಇನ್ನಷ್ಟು ಹೆಚ್ಚುತ್ತದೆ. ಮದರಂಗಿಯನ್ನು ಹಚ್ಚಿದಾಗ ಅದರ ಅನುಭವ ಒಂದು ರೀತಿಯ ಖುಷಿಯನ್ನ ನೀಡುತ್ತದೆ.

ಹೀಗೆ ನಾವು ಹಚ್ಚಿದ ಮೆಹಂದಿ ಸಮಾರಂಭಗಳು ಮುಗಿದ ಮೇಲೆ ಅಥವಾ ಮೆಜೆಂಡಿ ಹೋವುವಾಗ ಬಹಳಷ್ಟು ಹಿಂಸೆಯನ್ನ ನೀಡುತ್ತದೆ. ಹಸಚಿದ ಮದರಂಗಿ ಬೇಗ ಹೋಗಬೇಕು ಅಂದರೆ ಏನು ಮಾಡಬೇಕು ಎಂದು ಹಲವಾರು ಯೋಚಿಸುತ್ತಿರುತ್ತಾರೆ. ಅಂತವರಿಗೆ ಇಲ್ಲಿವೆ ನೋಡಿ ಕೆಲವು ಸುಲಭ ಉಪಾಯಗಳು

ಆಲೂಗಡ್ಡೆ :ಒಂದು ದಿನದಲ್ಲಿ ಮೆಹಂದಿ ಬಣ್ಣ ತೆಗೆದುಹಾಕಲು ಬಯಸಿದ್ದರೆ ಆಲೂಗಡ್ಡೆ ರಸವನ್ನು ಕೈಗೆ ಹಚ್ಚಿಕೊಂಡು ಅದು ಆರಲು ಬಿಡಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಆಲಿವ್ ಆಯಿಲ್: ಬೇಗ ಮೆಹಂದಿ ಬಣ್ಣ ಹೋಗಬೇಕೆಂದ್ರೆ ಆಲಿವ್ ಆಯಿಲ್ ಒಳ್ಳೆಯದು. ಒಂದು ಪಾತ್ರೆಯಲ್ಲಿ ಆಲಿವ್ ಆಯಿಲ್ ಹಾಕಿ ಕೈಯನ್ನು 10 ನಿಮಿಷ ಅದರಲ್ಲಿಡಿ. ನಂತ್ರ ಕೈಯನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಅಡುಗೆ ಸೋಡಾ: ಒಂದು ಬಟ್ಟಲಿನಲ್ಲಿ 3 ಚಮಚ ಅಡುಗೆ ಸೋಡಾ ಹಾಗು ಲಿಂಬೆ ರಸವನ್ನು ಮಿಕ್ಸ್ ಮಾಡಿ. ಅದನ್ನು ಕೈಗೆ ಹಾಕಿ ಉಜ್ಜಿಕೊಳ್ಳಿ. ನಂತ್ರ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ತೊಳೆಯಿರಿ.

ಬ್ಲೀಚಿಂಗ್ ಪುಡಿ: ಮೆಹಂದಿಯನ್ನು ತೆಗೆದು ಹಾಕಲು ಬ್ಲೀಚಿಂಗ್ ಪುಡಿ ಸಹಾಯ ಮಾಡುತ್ತದೆ. ಮೆಹಂದಿ ಹಚ್ಚಿದ ಜಾಗಕ್ಕೆ ಬ್ಲೀಚಿಂಗ್ ಪುಡಿಯನ್ನು ಹಚ್ಚಿ, ಕೈ ಉಜ್ಜಿಕೊಳ್ಳಿ ನಂತ್ರ ತೊಳೆಯಿರಿ. ಹೀಗೆ ಎರಡು ಮೂರು ಬಾರಿ ಮಾಡುವುದರಿಂದ ಮೆಹಂದಿ ಬಣ್ಣ ಮಾಸುತ್ತದೆ.

LEAVE A REPLY

Please enter your comment!
Please enter your name here