ಪ್ರತಿದಿನ ಸ್ನಾನ ಮಾಡುವವರು ಇದನ್ನ ತಿಳಿಯಲೇ ಬೇಕು. ಕೆಲವರು ಸ್ನಾನ ಮಾಡುವುದನ್ನು ಎಂಜಾಯ್ ಮಾಡುತ್ತಾರೆ ಇನ್ನು ಕೆಲವರು ಆಯೋ ಸ್ನಾನ ಮಾಡ್ಬೇಕಾಳಪ್ಪ ಅಂತ ಬೇಸರ ವ್ಯಕ್ತ ಪಡಿಸುತ್ತಾರೆ ಆದರೆ ಸಂಶೋಧನೆಯ ಪ್ರಕಾರ ಸ್ನಾನ ದೇಹಕ್ಕೆ ಒಳ್ಳೆಯದಾ ತಿಳಿಯೋಣ

ಪ್ರತಿದಿನ ಸ್ನಾನ ಮಾಡೋರು ಗಮನ ಇಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗ್ತಾರಂತೆ. ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ.

ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ ಪ್ರತಿದಿನ ಸ್ನಾನ ಮಾಡುವುದರಿಂದ ಹೋಗುತ್ತದೆ. ಇದರಿಂದಾಗಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಪಶ್ಚಿಮ ದೇಶಗಳ ಜನರಿಗೆ ಇದು ಒಳ್ಳೆಯದಲ್ಲ. ಯಾಕೆಂದ್ರೆ ಸ್ನಾನಕ್ಕಿಂತ ಮುನ್ನ ಅವರು ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದಿಲ್ಲ. ಹಾಗಾಗಿ ಅವರು ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತೆ ಸಂಶೋಧನೆ. ಆದ್ದರಿಂದ ನಿಮಗೆ ಬೇಕೆನಿಸಿದಾಗ ಅಥವಾ ಇಷ್ಟವಾದಾಗ ಮಾತ್ರ ಸ್ನಾನ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here