ತುಂಬೆ ಗಿಡ ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಈ ತುಂಬೆ ಗಿಡ ಹೆಚ್ಚಾಗಿ ಗೊತ್ತಿರುತ್ತದೆ, ಇದರಲ್ಲಿ ಹಲವು ಬೇನೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಜಾಂಡಿಸ್ ರೋಗದಲ್ಲಿ ಇದರ ಎಲೆಗಳ ರಸವನ್ನು ಕಾಡಿಗೆಯಂತೆ ಕಣ್ಣಿಗೆ ಹಚ್ಚಿಕೊಳ್ಳಬೇಕು, ಸರ್ಪವಿಷ, ಕ್ರಿಮಿರೋಗ, ನೆಗಡಿ, ಕೆಮ್ಮು, ದಮ್ಮು ಮುಟ್ಟಗಿರುವಾಗ ಅತ್ಯಂತ ನೋವು ಮತ್ತು ಕೆಲವು ರಕ್ತ ಸಂಬಂಧಿ ರೋಗಗಳನ್ನು ಇದರ ಇಡೀ ಕಾಂಡವನ್ನು ಜಜ್ಜಿ ತೆಗೆದ ರಸವನ್ನು ೫ ರಿಂದ ೧೦ ಮಿಲಿ ಗ್ರಾಂ ಪ್ರಮಾಣದಲ್ಲಿ ಸೇವಿಸುವುದರಿಂದ ಉತ್ತಮ ಪರಿಣಾಮ ಲಭಿಸುತ್ತದೆ.

ಮತ್ತೊಂದು ವಿಷಯ ಏನು ಅಂದ್ರೆ ತುಂಬೆ ಹೂಗಳನ್ನು ಹಾಲಿನಲ್ಲಿ ಅರೆದು ಆಗಿಂದಾಗ್ಗೆ ಸೇವಿಸಿದರೆ ಬಿಕ್ಕಳಿಕೆ ಶಮನವಾಗುವುದೆಂಬುದು ಅನುಭವಿ ವೈದ್ಯರು ಅಭಿಪ್ರಾಯವಾಗಿದೆ. ವಿಪರೀತ ಹಲ್ಲು ನೋವು ಮತ್ತು ಹಲ್ಲುಗಳೆಲ್ಲ ಅಲುಗಾಡುವ ಸ್ಥಿತಿಯುಂಟಾದಾಗ ಒಂದು ಹಿಡಿ ತುಂಬೆ ಬೇರನ್ನು ಒಂದು ಲೀಟರ್ ನೀರಿನಲ್ಲಿ ಕಷಾಯವಿರಿಸಿ ಅರ್ಧದಷ್ಟಕ್ಕೆ ಬತ್ತಿಸಿ ಅದಕ್ಕೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿದರೆ ನೋವು ಕಡಿಮೆ ಆಗುವುದರ ಜೊತೆಗೆ ಹಲ್ಲುಗಳೆಲ್ಲ ಗಟ್ಟಿಯಾಗುತ್ತದೆ, ಜೊತೆಗೆ ಒಸಡುಗಳಲ್ಲಿ ನರಗಳ ಊತ ನೋವು ಮತ್ತು ವಾಸನೆಗಳು ಹೋಗಲಾಡಿಸುತ್ತದೆ.

ಅಸಾಧ್ಯವಾದ ತಲೆ ನೋವಿನಿಂದಾಗಿ ರೋಗಿ ಯಾವುದೇ ಚಿಕಿತ್ಸೆಗೆ ತಲೆಯೊಡ್ಡಲು ಸಿದ್ಧನಾಗುತ್ತಾನೆ, ಆದರೆ ಶಸ್ತ್ರಚಿಕಿತ್ಸೆ ಇರುಸು ಮುರುಸು ಇಲ್ಲದೆ ಇದನ್ನು ತುಂಬೆಗಿಡದ ನೆರವಿನಿಂದ ಪೂರ್ಣವಾಗಿ ಗುಣಪಡಿಸಬಹುದೆಂದು ಡಾಕ್ಟರ್ ಸಾವಿತ್ರಿ ದೈತೋಟ ರವರು ಪ್ರಕಟಿಸಿದ್ದಾರೆ ವಿಧಾನ ಹೀಗಿದೆ.

ಸೂರ್ಯೋದಯಕ್ಕೆ ಮೊದಲೇ ತುಂಬೆ ಗಿಡದ ಎಲೆ ಚಿಗುರು ತಂದು ಸ್ವಚ್ಛಗೊಳಿಸಿ ಚೆನ್ನಾಗಿ ಹಿಸುಕಿ ರೋಗಿಯನ್ನು ಕುತ್ತಿಗೆಯಡಿಗೆ ದಿಂಬನ್ನು ಆಧಾರವಾಗಿಸಿ ಗದ್ದವನ್ನು ಸ್ವಲ್ಪ ಮೇಲಕ್ಕೆತ್ತಿ ಮೂಗಿನ ಪ್ರತಿ ಹೊಳ್ಳೆಗಳು ಸರಿಯಾಗಿ ಮೇಲ್ಮುಖವಾಗಿ ತೆರೆದು ಕೊಳ್ಳುವಂತೆ ಮಲಗಿಸಿ ಪ್ರತಿ ಹೊಳ್ಳುಗಳಿಗೂ ಆರಾರು ಬಿಂದು ತುಂಬೆರಸ ಹಿಂಡಬೇಕು.

ಒಂದೆರಡು ನಿಮಿಷ ಹಾಗೆಯೇ ಮಲಗಿದ್ದು ಆಮೇಲೆ ಎದ್ದು ತಲೆಯನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ಒಳಗಿನಿಂದ ಹರಿದು ಬರುವ ಮೂಗಿನ ಸುರಿಯುವಿಕೆ ಸುಲಭವಾಗಿ ಹರಿಯುವಂತೆ ಕುಳಿತುಕೊಳ್ಳಬೇಕು, ಹರಿಯುವುದು ನಿಂತ ಮೇಲೆ ಮೂಗು ಸ್ವಚ್ಛಗೊಳಿಸಬೇಕು, ಹೀಗೆ ಮೂರು ದಿನ ಹಾಕಬೇಕು ಈ ಪ್ರಕಾರವಾಗಿ ಮೂರು ನಾಲ್ಕು ಬಾರಿ ಮಾಡಿಕೊಂಡರೆ ಆಮೇಲೆ ಅರ್ಧ ತಲೆನೋವು ಆಗುವುದು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here