ಸಾಮಾನ್ಯವಾಗಿ ಮಹಿಳೆಯರು ಹೆಚ್ಚಾಗಿ ಪ್ರೀತಿಸುವ ಗಂಡ ಸಿಕ್ಕರೆ ಸಾಕು ಒಳ್ಳೆಯ ರೀತಿಯಲ್ಲಿ ನೋಡಿ ಕೊಂಡರೆ ಸಾಕು ಎಂಬುದಾಗಿ ಬಹಳಷ್ಟು ಹೆಣ್ಣು ಮಕ್ಕಳು ಇಷ್ಟ ಪಡುತ್ತಾರೆ, ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಗಂಡ ಅತಿ ಹೆಚ್ಚಾಗಿ ಪ್ರೀತಿಸುತ್ತಾನೆ ಎಲ್ಲದರಲ್ಲೂ ನನ್ನನ್ನು ಮೊದಲ ಆದ್ಯತೆ ಕೊಡುತ್ತಾನೆ ನನಗೆ ಈ ರೀತಿಯ ಗಂಡ ಬೇಡವೆಂದು ಮಹಿಳೆ ಮಡಿದ ಕೆಲಸವೇನು ಗೊತ್ತೇ?

ಅತಿಯಾಗಿ ಪ್ರೀತಿಸುವ ಗಂಡನಿಂದ ಮುಕ್ತಿಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ. ಹೌದು ಒಂದು ವರ್ಷದ ಹಿಂದೆ ಮದುವೆಯಾದ ಜೋಡಿ ಸುಖ ಸಂಸಾರ ನಡೆಸುತ್ತಿದ್ದು, ಪತಿ ತನ್ನ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಆಕೆ ಕಷ್ಟಪಡಬಾರದೆಂದು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತದ್ದ. ಇದು ಪತ್ನಿಗೆ ಅತಿರೇಕ ವರ್ತನೆ ಎನಿಸಿದ್ದು, ಇಂತಹ ಪತಿಯಿಂದ ನನಗೆ ವಿಚ್ಛೇದನ ನೀಡಿ ಎಂದು ಅರಬ್​ ಸಂಯುಕ್ತ ಸಂಸ್ಥಾನದ ಶಾರ್ಜಾ ಕೋರ್ಟ್​ ಮೊರೆ ಹೋಗಿದ್ದಾಳೆ.

ಈ ಘಟನೆಯನ್ನು ಅಲ್ಲಿನ ಪತ್ರಿಕೆ ವರದಿ ಮಾಡಿದೆ. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮದುವೆಯಾದ ಹೊಸದರಲ್ಲಿ ಇಂತಹ ತಪ್ಪುಗಳು ಆಗುವುದು ಸಹಜ. ಇದನ್ನು ನೀವೆ ಕುಳಿತು ಬಗೆಹರಿಸಿಕೊಳ್ಳಿ ಎಂದು ಆದೇಶಿಸಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here