ಕೆಲವರು ಚಿಕ್ಕ ಪುಟ್ಟ ವಿಷ್ಯಕ್ಕೆಲ್ಲ ಹೆಚ್ಚು ಕೋಪ ಗೊಳ್ಳುತ್ತಾರೆ, ಇದರಿಂದ ತಮಗೆ ತಾವೇ ನೋವನ್ನು ಅನುಭವಿಸುವ ಪರಿಸ್ಥಿತಿಯನ್ನು ತಂದುಕೊಳ್ಳುತ್ತಾರೆ. ಇನ್ನು ಕೆಲವರು ಕೋಪವನ್ನು ತಮ್ಮ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ರೆ ಕೋಪವನ್ನು ಕಡಿಮೆ ಮಾಡುವ ಸುಲಭ ವಿಧಾನಗಳು ಯಾವುವು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

ಕೋಪ ಬರುವಂತವರು ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸದೇ ಇರೋದು ಒಳ್ಳೆಯದು ಯಾಕೆಂದರೆ ನಿಮ್ಮ ಆಹಾರ ಸಹ ನಿಮ್ಮ ಭಾವನೆಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿರುತ್ತದೆ. ಆದ್ದರಿಂದ ಖಾರ ಹಾಗು ಎಣ್ಣೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಹೆಚ್ಚಿಗೆ ಸೇವಿಸಬೇಡಿ. ಇವುಗಳು ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ.

ಯಾವಾಗಲು ಒಬ್ಬರೇ ಇರದೇ ಸ್ನೇಹ ಜೀವಿಯಾಗಿರೋದು ಒಳ್ಳೆಯದು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಮನಸ್ಸು ಹಾಗು ದೇಹವನ್ನು ಒತ್ತಡಗಳಿಂದ ದೂರ ಮಾಡುತ್ತವೆ. ವ್ಯಾಯಾಮ ಯೋಗ, ಧ್ಯಾನ ಇವುಗಳನ್ನು ಮಾಡುತ್ತಿದ್ದಾರೆ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ.

ಆಕಸ್ಮಿಕವಾಗಿ ಕೆಲವೊಂದು ಕಾರಣಗಳಿಂದ ಪ್ರತಿಯೊಬ್ಬರಿಗೂ ಸಿಟ್ಟು ನೆತ್ತಿಗೇರುತ್ತದೆ. ಆಗ ಕುಟುಂಬದ ಮೇಲೋ, ಪ್ರೀತಿ ಪಾತ್ರರ ಮೇಲೋ ಹರಿಹಾಯುತ್ತೇವೆ. ಕೋಪ ನಿಯಂತ್ರಿಸಿಕೊಳ್ಳಲು ಕಲಿಯಬೇಕು ನಿಜ. ಸಿಟ್ಟು ಬಂದಾಕ್ಷಣ ಸಂಬಂಧ ಕಡಿದುಕೊಳ್ಳುವ ಮಾತನ್ನು ಆಡಬೇಡಿ. ಆ ಕ್ಷಣಕ್ಕೆ ಹೀಗೆ ಹೇಳುವುದರಿಂದ ನಾನೇ ಗೆದ್ದೆ ಎಂದು ಅನಿಸಬಹುದು. ಆದರೆ, ಅದರಿಂದ ದೀರ್ಘಕಾಲ ದುಃಖ ಪಡಬೇಕಾದ ಸ್ಥಿತಿ ಎದುರಾಗಬಹುದು.

ನಿಮಗೆ ಯಾರ ಮೇಲೆ ಕೋಪ ಬರತ್ತೋ ಅವರ ಮೇಲೆ ಕೋಪ ಮಾಡಿಕೊಳ್ಳುವ ಬದಲು ಅವರಿಂದ ನಮಗೆ ಅದ ಸಹಾಯ ಅಥವಾ ಅವರೊಂದಿಗೆ ಕಳೆದ ಸುಮದುರ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಉತ್ತಮ. ಯಾಕೆಂದರೆ ಕೋಪ ಬಂದಾಗ ನೆಆಗತಿವೆ ಚಿಂತನೆಗಳು ಬಂದಾಗ ಕೋಪ ಇನ್ನು ಜಾಸ್ತಿಯಾಗಿ ಸಂಬಂಧಗಳು ಮುರಿದು ಬೀಳುವ ಸಾಧ್ಯತೆ ಇರುತ್ತದೆ ಹಾಗಾಗಿ ಪಾಸಿಟಿವ್ ಥಿಂಕ್ ಮಾಡಿ.

ಧ್ಯಾನವನ್ನು ಮಾಡುವುದರಿಂದ ಪ್ರತಿದಿನ ನಿಮ್ಮ ಕೋಪವನ್ನು ತಣ್ಣಗೆ ಮಾಡಿಕೊಳ್ಳಬಹುದು ಅಷ್ಟೇ ಅಲ್ದೆ ನಿಮ್ಮ ಮನಸ್ಸು ಹಾಗು ದೇಹ ನಿಮ್ಮ ಹತೋಟಿಗೆ ತಂದುಕೊಳ್ಳಬಹುದು. ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗಲಿಲ್ಲವಾದರೆ ಮನಸ್ಸಿಗೆ ಕಿರಿಕಿರಿಯಾಗುವುದು ಸಹಜ. ಸರಿಯಾಗಿ ನಿದ್ದೆ ಮಾಡದೆ ಇದ್ದಾಗ ಆಯಾಸವಾಗಿ ನಿಮಗೆ ಹೆಚ್ಚು ಕೋಪ ಬರುವ ಸಾಧ್ಯತೆಗಳಿರುತ್ತವೆ ಆಗಾಗಿ ನಿದ್ರೆಯನ್ನು ಉತ್ತಮ ರೀತಿಯಲ್ಲಿ ಸಮಯಕ್ಕೆ ಸರಿಯಾಗಿ ಮಾಡುವುದು ಆರೋಗ್ಯಕ್ಕೂ ಹಿತವಾಗಿರುತ್ತದೆ.

LEAVE A REPLY

Please enter your comment!
Please enter your name here