ನಮ್ಮ ರಾಜ್ಯದಲ್ಲಿ ಹಲವು ಪ್ರವಾಸಿ ತಾಣಗಳಿವೆ ಹಾಗೂ ಹಲವು ವಿಶೇಷತೆ ಹೊಂದಿರುವಂತ ಧಾರ್ಮಿಕ ಕ್ಷೇತ್ರಗಳಿವೆ, ಅವುಗಳಲ್ಲಿ ಈ ಅಂತರಗಂಗೆ ಬೆಟ್ಟವು ಕೂಡ ಒಂದು ಈ ಕ್ಷೇತ್ರದ ವಿಶೇಷತೆ ಹಾಗೂ ಇಲ್ಲಿನ ಮಹತ್ವದ ಬಗ್ಗೆ ಒಮ್ಮೆ ತಿಳಿಯೋಣ ಬನ್ನಿ.

ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಎಂಬುದಾಗಿ ಕರೆಯಲಾಗುತ್ತದೆ, ಈ ಕ್ಷೇತ್ರ ಇರುವುದು ಎಲ್ಲಿ ಹಾಗೂ ಇದರ ವಿಶೇಷತೆ ಏನು ಅನ್ನೋದನ್ನ ತಿಳಿಸಲು ಬಯಸುತ್ತೇವೆ. ಇದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಕೋಲಾರದಿಂದ ಸುಮಾರು 4 ಕಿ. ಮೀ. ದೂರದಲ್ಲಿ ಅಂತರಗಂಗೆ ಬೆಟ್ಟವಿದೆ. ಅಂತರಗಂಗೆ ಬೆಟ್ಟವನ್ನು ದಕ್ಷಿಣಕಾಶಿ ಎಂಬುದಾಗಿ ಕರೆಯಲಾಗುತ್ತದೆ ಇಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ನೀರು ಹರಿಯುತ್ತಿರುತ್ತದೆ.

ಈ ಕ್ಷೇತ್ರದ ಒಂದಿಷ್ಟು ಮಾಹಿತಿ: ಈ ಅಂತರಗಂಗೆ ಬೆಟ್ಟದ ಸುತ್ತಲೂ ೭-೮ ಹಳ್ಳಿಗಳಿವೆ ಅವುಗಳಲ್ಲಿ ತೇರಹಳ್ಳಿ, ಪಾಪನಾಯಕನ ಹಳ್ಳಿ, ಕೆಂಚೇಗೌಡನ ಹಳ್ಳಿ ಮತ್ತು ಹಲವಾರು ಇತರದ ಏಳು ಹಳ್ಳಿಗಳಿವೆ. ಹುಣ್ಣಿಮೆಯ ದಿನದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಈ ಬೆಟ್ಟವು ಪರಶುರಾಮ ಹಾಗು ಜಮದಗ್ನಿಗೆ ಸಂಬಂಧಿಸಿದೆ. ಹಿಂದೂ ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದಿದ್ದಾನೆ, ನಂತರ ಜಮದಗ್ನಿಯ ಸಾವು ಹಾಗು ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ.

ಪೌರಾಣಿಕ ಹಿನ್ನಲೆ: ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ನಂಬಿಕೆ. ಬೆಟ್ಟದ ಮೇಲೆ ಶಿವನ ದೇವಸ್ಥಾನ, ಅದರ ಪಕ್ಕದಲ್ಲೇ ಕಲ್ಯಾಣಿ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಮೂರ್ತಿಯ ಬಾಯಿಯಿಂದ ನಿರಂತರವಾಗಿ ಗಂಗೆ ಹರಿಯುವುದು ಇಲ್ಲಿನ ವಿಶೇಷ. ಈ ಕಾರಣಕ್ಕೆ ಈ ಪ್ರದೇಶಕ್ಕೆ ಅಂತರಗಂಗೆ ಎಂಬ ಹೆಸರು ಬಂದಿದೆ.

ಬಸವಣ್ಣನ ಬಾಯಿಯಿಂದ ಬರುವ ನೀರಿನ ಒರತೆಯು ಈವರೆಗೆ ಒಮ್ಮೊಯೂ ನಿಂತಿಲ್ಲ. ಈ ಬೆಟ್ಟದ ಸುತ್ತ ವಾಸಿಸುತ್ತಿರುವ ನಿವಾಸಿಗಳ ಪ್ರಕಾರ, ಅಂತರಗಂಗೆ ವರ್ಷದ ಎಲ್ಲ ದಿನಗಳಲ್ಲಿಯೂ ಒಂದೇ ರೀತಿ ಹರಿಯುತ್ತದೆ. ಈ ಕ್ಷೇತ್ರಕ್ಕೆ ಹೋದಳು ದಾರಿ ಮಾರ್ಗ ಬೆಂಗಳೂರಿನಿಂದ ಕೋಲಾರ ಮಾರ್ಗವಾಗಿ ಸುಮಾರು 65 ಕಿ.ಮೀ. ಸಾಗಬೇಕು. ಕೇವಲ ಎರಡೂವೆರೆ ಗಂಟೆಯಲ್ಲಿ ಕೋಲಾರ ತಲುಪಬಹುದು. ಅಲ್ಲಿಂದ ನಾಲ್ಕು ಕಿ.ಮೀ. ಸಾಗಿದರೆ ಅಂತರಗಂಗೆ ಬೆಟ್ಟವನ್ನು ತಲುಪಬಹುದು.

LEAVE A REPLY

Please enter your comment!
Please enter your name here