ಪ್ರತಿಯೊಬ್ಬರ ದೇಹದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮಚ್ಚೆಗಳು ಇರುತ್ತವೆ, ಆದ್ರೆ ಪ್ರತಿಯೊಬ್ಬರಿಗೂ ಒಂದೇ ರೀತಿಯಲ್ಲಿ ಮಚ್ಚೆ ಇರೋದಿಲ್ಲ. ಒಬ್ಬೊಬ್ಬರ ದೇಹದ ಮೇಲೆ ಬೇರೆ ಬೇರೆ ಜಾಗದಲ್ಲಿ ಮಚ್ಚೆಗಳು ಇರುತ್ತವೆ, ಅಂತಹ ಜಾಗದಲ್ಲಿ ಇರುವಂತ ಮಚ್ಚೆಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಈ ಮೂಲಕ ತಿಳಿಯೋಣ ಬನ್ನಿ..

ದೇಹದ ಈ ಭಾಗದಲ್ಲಿ ಮಚ್ಚೆಗಳು ಇದ್ರೆ ಅವು ಶುಭ ಅಥವಾ ಅಶುಭನಾ ಅನ್ನೋದನ್ನ ಇಲ್ಲಿ ನೋಡಿ…
ಶಾಸ್ತ್ರಗಳು ಹಾಗು ನಮ್ಮ ಹಿರಿಯರು ಹೇಳುವ ಹಾಗೆ ಕೆಲವರಿಗೆ ಈ ಕೆಲವೊಂದು ಜಾಗದಲ್ಲಿ ಮಚ್ಚೆಗಳು ಇದ್ರೆ ಹುಟ್ಟಿನಿಂದಲೇ ಅದೃಷ್ಟವತರಾಗಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ.

ತಲೆಯ ಬಲಭಾಗದಲ್ಲಿ ಅಂದ್ರೆ ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ರೆ ಈ ವ್ಯಕ್ತಿಗಳು ತುಂಬಾನೇ ಅದೃಷ್ಟವಂತರಾಗಿರುತ್ತಾರಂತೆ, ಹಾಗು ಅತಿ ಸಿರಿವಂತರಾಗಿರುತ್ತಾರಂತೆ. ಇವರು ಕಳೆಯುವ ದಿನಗಳು ಕಷ್ಟದ ದಿನಗಳಿಂದ ಹೆಚ್ಚಾಗಿ ಸುಖದ ದಿನಗಳನ್ನು ಕಳೆಯುತ್ತಾರೆ.

ಕೈ ಮೇಲೆ ಮಚ್ಚೆ ಇದ್ರೆ, ಮಾಡುವಂತ ಕೆಲಸವೆಲ್ಲ ಯಶಸ್ಸನ್ನು ತರುತ್ತದೆ ಜೊತೆಗೆ ನಿಮಗೆ ಅದೃಷ್ಟದ ಬಲ ಸದಾ ಇರುತ್ತದೆ ಅನ್ನೋದನ್ನ ಈ ಮಚ್ಚೆ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ಬಲಗಡೆ ಕೆನ್ನೆಯ ಮೇಲೆ ಮಚ್ಚೆ ಇದ್ರೆ, ಇವರು ಅತಿ ಸೂಕ್ಷ ಜೀವಿಗಳಾಗಿರುತ್ತಾರೆ. ಸಣ್ಣ ಸಣ್ಣ ವಿಚಾರಕ್ಕೂ ಅಳುತ್ತಾರೆ ಹಾಗು ಹೆಚ್ಚಾಗಿ ಇಂತಹ ವಿಷಯಗಳನ್ನು ಮನಸ್ಸಿಗೆ ಹಾಕಿಕೊಳ್ಳುತ್ತಾರೆ, ಇವರು ತಂದೆ ತಾಯಿಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇವರ ಜೀವನದಲ್ಲಿ ಅಸ್ತಿ ಗಳಿಕೆಯ ದಾರಿಗಳು ಸುಲಭವಾಗಿ ಸಿಗುತ್ತವೆ ಅನ್ನೋದನ್ನ ತಿಳಿಯಲಾಗುತ್ತದೆ.

ಹುಬ್ಬಿನ ಕೆಳಭಾದಲ್ಲಿ ಮಚ್ಚೆ ಇದ್ರೆ ಈ ವ್ಯಕ್ತಿಗಳು ಬುದ್ದಿವಂತರಾಗಿರುತ್ತಾರಂತೆ, ಇನ್ನು ಮಹಿಳೆಯರಲ್ಲಿ ಈ ರೀತಿಯ ಮಚ್ಚೆ ಇದ್ರೆ ಅತಿ ಬುದ್ದಿಶಾಲಿಗಳಾಗಿರುತ್ತಾರೆ ಜೊತೆಗೆ ಸೃಜನಶೀಲರಾಗಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ.

ಹುಡುಗಿಯರಲ್ಲಿ ತುಟಿಯ ಸ್ವಲ್ಪ ಮೇಲ್ಬಾಗದಲ್ಲಿ ಈ ಮಚ್ಚೆ ಇದ್ರೆ ಅತಿ ಸುಂದರಿಯರು ಆಗಿರುತ್ತಾರೆ, ಜೊತೆಗೆ ಮದುವೆಯಾದ ಮೇಲೆ ಸಂಸಾರದಲ್ಲಿ ಯಾವುದೇ ತರಹದ ಸಮಸ್ಯೆ ಬಂದ್ರೆ ಇದನ್ನು ಸುಲಭವಾಗಿ ನಿಭಾಯಿಸುವ ಗುಣ ಇವರಲ್ಲಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಕೆಲ ತುಟಿಯ ಮೇಲೆ ಮಚ್ಚೆ ಇರುವಂತವರು ಯಾವುದೇ ಸಂಕೋಚವನ್ನು ಪಡೋದಿಲ್ಲ ನೇರ ಮಾತುಗಾರಿಕೆ ಹಾಗು ಯಾವುದರಲ್ಲೂ ಸಂಸಿಕೋಚದ ಮನೋಭಾವನೆಯನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here