ಲೋ ಬಿಪಿ ಸಮಸ್ಯೆಗೆ ನಾರ್ಮಲ್ ಮಾಡುವ ಸೂಕ್ತ ಮನೆಮದ್ದುಗಳಿವು!

0
3610

ಲೋ ಬಿಪಿ ಸಮಸ್ಯೆ ಕೆಲವರಿಗೆ ಹೆಚ್ಚಾಗಿ ಕಾಡುತ್ತದೆ ಇದರಿಂದ ಕೆಲವೊಮ್ಮೆ ಪ್ರಾಣಾಪಾಯಕ್ಕೆ ಕುತ್ತುಬರಬಹುದು ಹಾಗಾಗಿ ಇದರಿಂದ ದೂರವಿರಲು ಕೆಲವು ಸೂಕ್ತ ಮನೆಮದ್ದುಗಳು ಇಲ್ಲಿವೆ ಇವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಸಹಕಾರಿ.

ಲೋ ಬಿಪಿ ಸಮಸ್ಯೆ ಬರಲು ಹಲವು ಕಾರಣಗಳಿವೆ ಅವುಗಲ್ಲಿ ಇದು ಕೂಡ ಒಂದು ದೇಹದಲ್ಲಿ ಪೋಷಕಾಂಶಗಳ ಕೊರತೆ ಇರುವುದರಿಂದ ಲೋ ಬಿಪಿ ಸಮಸ್ಯೆ ಕಾಡುತ್ತದೆ.

ಲೋ ಬಿಪಿ ಸಮಸ್ಯೆಗೆ ಪರಿಹಾರ ಮಾರ್ಗಗಳಿವು: ಪ್ರತಿದಿನ ಪೋಷಕಾಂಶ ಭರಿತವಾದ ಆಹಾರಗಳನ್ನು ಸೇವನೆ ಅಂಡುವುದರ ಜತೆಗೆ ನಿತ್ಯ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಹೆಚ್ಚುತ್ತದೆ ಹಾಗೂ ಇದರಿಂದ ದೇಹದ ಅರೋಗ್ಯ ವೃದ್ಧಿಯಾಗುವುದು. ಊಟದಲ್ಲಿ ಉಪ್ಪು ಸೇವನೆ ಸ್ವಲ್ಪ ಜಾಸ್ತಿ ಮಾಡುವುದರಿಂದ ಲೋ ಬಿಪಿ ಸಮಸ್ಯೆ ನಿವಾರಣೆಯಾಗುವುದು. ಆದರೆ, ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆಗೂ ಮುನ್ನ ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ದೇಹಕ್ಕೆ ನೀರಿನಂಶ ಹೆಚ್ಚಾಗಿ ಅಗತ್ಯವಾಗಿದೆ ಆಗಾಗಿ ಪ್ರತಿದಿನ ಹೆಚ್ಚು ನೀರು ಸೇವನೆ ಮಾಡುವುದರಿಂದ ಒಳ್ಳೆಯದು ದೇಹದ ಸಾಮಾನ್ಯ ಕಾರ್ಯಚಟುವಟಿಕೆಗೆ ನೀರು ಕುಡಿಯುವುದು ಅಗತ್ಯವಾಗಿದೆ. ಪ್ರತಿದಿನ ಎರಡು ಬಾರಿ ಹಸಿ ಬೀಟ್‌ರೂಟ್‌ ಜ್ಯೂಸ್‌ ಕುಡಿಯಿರಿ. ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಇದು ಉತ್ತಮ ಮನೆ ಮದ್ದುಗಳಲ್ಲಿ ಒಂದಾಗಿದೆ. ಇನ್ನು, ಸ್ಟ್ರಾಂಗ್ ಬ್ಲಾಕ್‌ ಕಾಫಿ ಕುಡಿದರೂ ಸಹ ಸಹಾಯವಾಗಬಹುದು. ಬಾದಾಮಿ ಪೇಸ್ಟ್‌ ಮಾಡಿಕೊಂಡು ಉಗುರು ಬೆಚ್ಚಗಿನ ಹಾಲಿನೊಂದಿಗೆ ಕುಡಿದರೂ ಸಹಾಯವಾಗುತ್ತದೆ ಎಂದು ಸಹ ಕೆಲವರು ಸಲಹೆ ನೀಡುತ್ತಾರೆ.

ಪ್ರತಿದಿನ ಒಳ್ಳೆಯ ಪೋಷಕಾಂಶ ಭರಿತವಾದ ಊಟವನ್ನು ಮಾಡುವುದರ ಜತೆಗೆ ನಿಮ್ಮ ದಿನನಿತ್ಯ ಚಟುವಟಿಕೆಯಲ್ಲಿ ಸ್ವಲ್ಪ ವ್ಯಾಯಾಮವನ್ನೂ ಅಳವಡಿಸಿಕೊಳ್ಳಿ ಇದರಿಂದ ದೇಹದಲ್ಲಿ ಉತ್ತಮ ಅರೋಗ್ಯ ವೃದ್ಧಿಗೆ ಸಹಕಾರಿ.

LEAVE A REPLY

Please enter your comment!
Please enter your name here