ಉಗುರು ಸುತ್ತು ಸಮಸ್ಯೆ ಇದ್ರೆ ತುಂಬಾನೇ ನೋವು ಹಾಗೂ ನೆಮ್ಮದಿಯನ್ನು ಹಾಳು ಮಾಡುತ್ತದೆ, ಇದರಿಂದ ಆದಷ್ಟು ಬೇಗ ನಿವಾರಣೆಯನ್ನು ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಉಗುರು ಸುತ್ತು ಸಮಸ್ಯೆಗೆ ಹಲವು ಮನೆಮದ್ದುಗಳಿವೆ ಆದ್ರೆ ಅವುಗಳಲ್ಲಿ ನಿಮಗೆ ಸುಲಭವಾಗಿ ಪರಿಹರಿಸಿಕೊಳ್ಳುವಂತ ಮನೆಮದ್ದನ್ನು ತಿಳಿಸಲು ಬಯಸುತ್ತೇವೆ ಮುಂದೆ ನೋಡಿ.

ಉಗುರು ಸುತ್ತು ಆಗಿದ್ರೆ ಅಪರಂಜಿ ಸೊಪ್ಪನ್ನು ನಿಂಬೆರಸದಲ್ಲಿ ಅರೆದು ಕಟ್ಟಿ ಅಥವಾ ಒಂದು ನಿಂಬೆಹಣ್ಣಿಗೆ ಕೈ ಬೆರಳು ಆಡಿಸುವಷ್ಟು ಒಂದು ಚಿಕ್ಕ ತೂತನ್ನು ಮಾಡಿ, ಆ ತೂತಿನಲ್ಲಿ ಉಗುರು ಸುತ್ತಾದ ಬೆರಳನ್ನು ತೂರಿಸಿ ಇಟ್ಟುಕೊಳ್ಳಿ ಒಂದೆರಡು ದಿನದಲ್ಲಿ ನಿಮಗೆ ಕಾಡುವಂತ ಉಗುರು ಸುತ್ತು ಸಮಸ್ಯೆ ನಿವಾರಣೆಯಾಗುವುದು.

ನಿಂಬೆಹಣ್ಣಿನ ಮತ್ತೊಂದು ಉಪಯೋಗವೆಂದರೆ: ಮುಖದ ಮೇಲಿನ ಮೊಡವೆಯನ್ನು ನಿವಾರಿಸಿಕೊಳ್ಳಲು, ನಿತ್ಯ ಬೆಳಗ್ಗೆ ನಿಂಬೆ ರಸವನ್ನು ಲೇಪಿಸಿದರೆ ಮೊಡವೆ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ಹಾಲಿನ ಕೆನೆಯ ಜೊತೆಗೆ ನಿಂಬೆ ರಸವನ್ನು ಸೇರಿಸಿ ಲೇಪಿಸಿಕೊಳ್ಳಬಹುದು. ನಿಂಬೆ ರಸದ ಜತೆಗೆ ಜೇನು ಸೇರಿಸಿ ಕೂಡ ಲೇಪಿಸಬಹುದಾಗಿದೆ.

ಪ್ರತಿದಿನ ಅಪ್ಡೇಟ್ ವಿಷಯಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿಕೊಳ್ಳಿ ಹಾಗೂ ನಮ್ಮಲ್ಲಿ ತಿಳಿಯುವಂತ ವಿಚಾರಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here