ಮನೆಯ ಸುತ್ತಲೂ ಗಿಡ ಮರಗಳನ್ನು ಬೆಳೆಸುವ ಪೌರುವೃತ್ತಿ ಕೆಲವರದ್ದು, ಇನ್ನು ಕೆಲವರು ಮನೆಯ ಸುತ್ತಲೂ ಗಿಡಗಳನ್ನು ಬೆಳೆಸಲು ಜಾಗವಿಲ್ಲ ಅನ್ನೋ ಕೊರತೆ ಮತ್ತೆ ಕೆಲವರದ್ದು. ಮನೆಯ ಸುತ್ತಲೂ ಕೆಲಸಕ್ಕೆ ಬಾರದ ಗಿಡ ಮರಗಳನ್ನು ಬೆಳೆಸುವ ಬದಲು ಇವುಗಳನ್ನು ಬೆಳೆಸಿ ನಿಮಗೂ ನಿಮ್ಮ ಮನೆಗೂ ಹೆಚ್ಚು ಪ್ರಯೋಜನವಿದೆ.

ಅಷ್ಟಕ್ಕೂ ಮನೆಯ ಸುತ್ತಲೂ ಯಾವೆಲ್ಲ ಗಿಡಗಳನ್ನು ಬೆಳೆಸಿದರೆ ಯಾವ ಪ್ರಯೋಜನ ಹೇಗಿದೆ ಅನ್ನೋದನ್ನ ತಿಳಿಯೋಣ.
ಮನೆ ಸುತ್ತಲಿನ ವಾತಾವರಣ ಚೆನ್ನಾಗಿದ್ದರೆ ನಮ್ಮ ನಿಮ್ಮ ಅರೋಗ್ಯ ಕೂಡ ಉತ್ತಮ ರೀತಿಯಲ್ಲಿರುತ್ತದೆ ಹಾಗಾಗಿ ಮನೆಯ ಸುತ್ತಲೂ ಸೊಳ್ಳೆಗಳ ಸಮಸ್ಯೆ ಹೆಚ್ಚಾಗಿದ್ದರೆ, ಇದರಿಂದ ದೂರ ಇರಲು ಹಾಗೂ ನಿಮ್ಮ ಮನೆಯ ಸುತ್ತಲೂ ಸೊಳ್ಳೆಗಳು ನುಸುಳದಂತೆ ಮಾಡಲು ಈ ಗಿಡಗಳನ್ನು ಬೆಳೆಸುವುದು ಸೂಕ್ತ.

ನಿಮ್ಮ ಮನೆ ಮುಂದೆ ಸ್ವಲ್ಪ ಮಟ್ಟಿಗೆ ಜಾಗವಿದ್ದರೆ ಈ ಗಿಡಗಳನ್ನು ಬೆಳೆಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.
ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸಿ, ಇದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು ಹಾಗು ಈ ಗಿಡದ ವಾಸನೆಗೆ ಸೊಳ್ಳೆಗಳು ಸುಳಿಯುವುದಿಲ್ಲ ನೀವು ಇದರಿಂದ ನೆಮ್ಮದಿಯಾಗಿ ನಿದ್ದೆ ಮಾಡಬಹುದು ಕೂಡ ಮಾಡಬಹುದು.

ಚಂಡು ಹೂವಿನ ಗಿಡವನ್ನು ನಿಮ್ಮ ಮನೆಯ ಮುಂದೆ ಬೆಳೆಸಿ ಇದರಿಂದ ಉತ್ತಮ ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು. ಈ ಗಿಡದ ವಾಸನೆಗೆ ಯಾವುದೇ ತರಹದ ವಿಷ ಜಂತುಗಳು ಬರುವುದಿಲ್ಲ. ಹೆಚ್ಚು ಸೊಳ್ಳೆಗಳ ಸಮಸ್ಯೆ ಇದ್ದರೆ ಚೆಂಡು ಹೂವನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ.

ಲವಂಗದ ಗಿಡವನ್ನು ಬೆಳೆಸಿ ಇದರ ವಾಸನೆಗೆ ಸೊಳ್ಳೆಗಳು ಮನೆಯ ಸುತ್ತಮುತ್ತಲು ಬರದಂತೆ ತಡೆಗಟ್ಟುತ್ತದೆ, ಅಷ್ಟೇ ಅಲ್ಲದೆ ಲವಂಗದ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ.

ಮನೆಯ ಸುತ್ತಲೂ ಚಿಕ್ಕದಾಗಿ ಜಾಗವಿದ್ದರೂ ಕೂಡ ಈ ಗಿಡಗಳನ್ನು ಬೆಳೆಸುವುದರಿಂದ ಮನೆಯ ಸುತ್ತಲೂ ಯಾವುದೇ ವಿಷ ಜಂತುಗಳು ಬರೋದಿಲ್ಲ ಹಾಗೂ ಮನೆಯ ವಾತಾವರ ಮನೆಯವರ ಅರೋಗ್ಯ ಎಲ್ಲವು ಕೂಡ ಉತ್ತವಾಗಿರುತ್ತದೆ.

LEAVE A REPLY

Please enter your comment!
Please enter your name here