ರಾಗಿ ಅಂದ್ರೆ ಆರೋಗ್ಯದ ನೀಡಿ ಎಂಬುದಾಗಿ ಹೇಳಬಹುದು ಯಾಕೆಂದರೆ ಇದರಲ್ಲಿ ಅಷ್ಟೊಂದು ಆರೋಗ್ಯಕಾರಿ ಪ್ರಯೋಜನಗಳಿವೆ, ರಾಗಿ ತಿಂದೋನು ನಿರೋಗಿ ಅನ್ನೋ ಮಾತು ಸತ್ಯ. ರಾಗಿಯನ್ನು ಬಳಸಿ ಹಲವು ಬಗೆಯ ಆಹಾರಗಳನ್ನು ತಯಾರಿಸಿ ತಿನ್ನುವುದರಿಂದ ದೇಹಕ್ಕೆ ಪ್ರೊಟೀನ್ ಅಂಶ ದೊರೆಯುತ್ತದೆ. ಅಷ್ಟೇ ಅಲ್ದೆ ದೇಹಕ್ಕೆ ಹಿತ ನೀಡುವಂತ ರಾಗಿ ಅಂಬಲಿ, ರೊಟ್ಟಿ, ಮುದ್ದೆ ಮುಂತಾದವುಗಳನ್ನು ಸೇವನೆ ಮಾಡುವುದರಿಂದ ದೇಹದ ಅರೋಗ್ಯ ಹೆಚ್ಚಿನ ಮಟ್ಟದಲ್ಲಿ ವೃದ್ಧಿಯಾಗುವುದು.

ಅನಾರೋಗ್ಯದಿಂದ ಬಳಲುತ್ತಿರುವ ಸಮಯದಲ್ಲಿ ರಾಗಿ ಹಂಬಲಿ ಸೇವನೆ ಮಾಡುವುದು ಕೂಡ ಸೂಕ್ತ ಎಂಬುದಾಗಿ ವೈದ್ಯರೇ ಹೇಳುತ್ತಾರೆ. ರಾಗಿಯನ್ನು ಅಡುಗೆಯಲ್ಲಿ ಬಳಸಿ ಪ್ರತಿದಿನ ಸೇವನೆ ಮಾಡುವುದರಿಂದ ಯಾವುದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದಿಲ್ಲ ಅಷ್ಟೇ ಅಲ್ಲದೆ ದೇಹದ ಅರೋಗ್ಯ ಹೆಚ್ಚಿನದಾಗಿ ವೃದ್ಧಿಯಾಗುತ್ತದೆ.

ರಾಗಿಯಿಂದ ಸಿಗುವಂತ ಆರೋಗ್ಯಕಾರಿ ಪ್ರಯೋಜನಗಳು:
ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರ. ಇದು ಅರೋಗ್ಯ ವೃದ್ಧಿಸಿ ಅಸ್ತಮಾ ಬರದಂತೆ ತಡೆಗಟ್ಟುತ್ತದೆ. ದೇಹದ ಮೂಳೆಗಳು ಸ್ಟ್ರಾಂಗ್ ಆಗಿಸುತ್ತದೆ. ಇದರಲ್ಲಿರುವ ಕ್ಯಾಲ್ಷಿಯಂ ಮತ್ತು ಮಿಟಮಿನ್ ಡಿ ಮಕ್ಕಳಿಗೆ ಹಾಗೂ ವೃದ್ಧರಿಗೆ ಅಗತ್ಯ ಪೋಷಕಾಂಶಗಳನ್ನು ನೀಡಿ ದೇಹವನ್ನು ಗಟ್ಟಿಮುಟ್ಟಾಗಿರುವಂತೆ ಮಾಡುತ್ತದೆ.

ಹೇಳಬೇಕೆಂದರೆ ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿವೆ. ಇವು ದೇಹದಲ್ಲಿ ಕ್ಯಾನ್ಸರ್ ಕೋಶಗಳ ನಿವಾರಿಸುತ್ತದೆ. ಮಹಿಳೆಯರನ್ನು ಹೆಚ್ಚಾಗಿ ಕಾಡುವ ರಕ್ತಹೀನತೆ ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕ ಸಮಸ್ಯೆ. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿದೆ. ಇದರಿಂದ ರಕ್ತಹೀನತೆಯನ್ನು ತಡೆಯಬಹುದು.

ಮತ್ತೊಂದು ವಿಶೇಷತೆ ಅಂದ್ರೆ ರಾಗಿ ತಿಂದರೆ ಅದರಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುತ್ತದೆ.
ಇದರಲ್ಲಿರುವ ಮೆಗ್ನೀಷಿಯಂ ಅಂಶ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯಾಘಾತ ಸಮಸ್ಯೆ ನಿವಾರಿಸುತ್ತದೆ.ರಾಗಿಯನ್ನು ಸೇವಿಸುವ ಜನರಲ್ಲಿ ಶೇ.30ರಷ್ಟು ಮಧುಮೇಹ ಇಳಿಕೆ ಕಂಡುಬರುತ್ತದೆ. ಉತ್ತಮ ಆರೋಗ್ಯದ ದೃಷ್ಟಿಯಿಂದ ರಾಗಿಯನ್ನು ತಿನ್ನುವುದು ಒಳ್ಳೆಯದು ಎಂಬುದಾಗಿ ಹೇಳಲಾಗುವುದು.

LEAVE A REPLY

Please enter your comment!
Please enter your name here