ರಾಗಿಯಲ್ಲಿ ದೇಹಕ್ಕೆ ಬೇಕಾಗುವಂತ ಹಲವು ಪೋಷ್ಟಿಕಾಂಶಗಳಿವೆ, ರಾಗಿ ರೊಟ್ಟಿ ರಾಗಿ ಮುದ್ದೆ, ರಾಗಿ ಹಂಬಲಿ ಇವುಗಳನ್ನು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು ಅಷ್ಟೇ ಅಲ್ಲದೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಕೂಡ ಇರೋದಿಲ್ಲ. ದೇಹಕ್ಕೆ ತಂಪು ನೀಡುವಂತ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭವಿದೆ ಅನ್ನೋದನ್ನ ಮುಂದೆ ನೋಡಿ..

ರಾಗಿ ಅಂಬಲಿಯಲ್ಲಿ ಪ್ರೊಟೀನ್ ಹಾಗು ಕ್ಯಾಲ್ಶಿಯಂ ಅಂಶ ಇರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಉತ್ತಮ ಎನರ್ಜಿ ಹಾಗು ಶಕ್ತಿ ಸಿಗುತ್ತದೆ, ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ ಬೆಳೆಯಲು ಸಹಕಾರಿಯಾಗಿದೆ. ಆಂಟಿ ಆಂಕ್ಸಿಡೆಂಟ್ ಗುಣವನ್ನು ಹೊಂದಿರುವಂತ ಈ ರಾಗಿಯಲ್ಲಿ ಉತ್ತಮ ಅರೋಗ್ಯ ಸಿಗುವುದರ ಜೊತೆಗೆ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ.

ಹಲವು ರೀತಿಯ ಜಂಕ್ ಫುಡ್ ಗಳನ್ನೂ ತಿಂದು ದೇಹದಲ್ಲಿ ಬೊಜ್ಜು ಬೆಳೆಸಿಕೊಳ್ಳುವ ಬದಲು, ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಾಗು ರಕ್ತದಲ್ಲಿ ಕೊಬ್ಬಿನಂಶ ಇರೋದಿಲ್ಲ. ಮದುಮೇಹ ಸಮಸ್ಯೆ ಇರೋರು ವಾರದಲ್ಲಿ ಮೂರೂ -ನಾಲ್ಕು ಬಾರಿ ರಾಗಿ ಅಂಬಲಿಯನ್ನು ಸೇವಿಸುವುದು ಒಳ್ಳೆಯದು.

ರಾಗಿ ಅಂಬಲಿಯನ್ನು ಸೇವಿಸುವುದರಿಂದ ತಲೆಕೂದಲ ಅರೋಗ್ಯ ಹಾಗು ವಿಟಮಿನ್ ಡಿ ಸಮಸ್ಯೆ ನಿವಾರಣೆಯಾಗುವುದು ಅಷ್ಟೇ ಅಲ್ಲದೆ ರಾತ್ರಿವೇಳೆ ರಾಗಿಯಿಂದ ತಯಾರಿಸಿದ ಊಟವನ್ನು ಮಾಡುವುದರಿಂದ ಸುಖವಾದ ನಿದ್ರೆಯನ್ನು ಮಾಡಬಹುದು. ನಿಮಗೆ ಗೊತ್ತಿರಬಹುದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ರಾಗಿ ಮುದ್ದೆ, ರೊಟ್ಟಿ, ಅಂಬಲಿಯನ್ನು, ಸೇವಿಸುವುದರಿಂದ ಗಟ್ಟಿಯಾಗಿರುತ್ತಾರೆ ಹಾಗು ಶಕ್ತಿಶಾಲಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here