ಕುಂಬಳಕಾಯಿ ಬೀಜ ಪುರುಷರಲ್ಲಿ ವೀರ್ಯಾಣು ಹೆಚ್ಚಿಸುತ್ತದೆ ಎಂಬುದಾಗಿ ಕೆಲವು ಅಧ್ಯಯನಗಳು ತಿಳಿಸುತ್ತವೆ, ಇದರಲ್ಲಿ ಪ್ರೊಟೀನ್ ಅಂಶ ಹಾಗು ಮೆಗ್ನಿಶಿಯಂ, ಕಬ್ಬಿಣ, ಸತು ಮತ್ತು ಪೊಟಾಶಿಯಂ ಇರುವ ಕಾರಣಕ್ಕೆ ಮನುಷ್ಯನ ದೇಹಕ್ಕೆ ಹೆಚ್ಚು ಸಹಕಾರಿಯಾಗಿದೆ.

ಕುಂಬಳಕಾಯಿ ಬೀಜ ಸೇವನೆಯಿಂದ ಪೃಷರಲ್ಲಿ ವೀರ್ಯಾಣು ವೃದ್ಧಿಯಾಗುತ್ತದೆ, ಹಾಗು ದೇಹದಲ್ಲಿ ಬೆಳವಣಿಗೆ ಹಾರ್ಮೋನುಗಳಿಗೆ ಸಹಕರಿಸುತ್ತದೆ.

ದೇಹದಲ್ಲಿ ಸ್ನಾಯುಗಳ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿರುವ ಇದು, ವೈರಸ್ ಮೂಲಕ ಬರುವಂತ ಶೀತ ಜ್ವರ ಮುಂತಾದವುಗಳು ಬರದಂತೆ ತಡೆಯುತ್ತದೆ.

ಅಜಿರಂತೆಯನ್ನು ನಿವಾರಿಸುತ್ತದೆ, ಇದರಲ್ಲಿ ನಾರೀಮಶ ಇರುವ ಕಾರಣಕ್ಕೆ ತಿನ್ನುವಂತ ಆಹಾರಗಳನ್ನು ಸಲೀಸಾಗಿ ಜೀರ್ಣವಾಗಲು ಸಹಕರಿಸುತ್ತದೆ.

ಕುಂಬಳಕೆಯಿ ಬೀಜವನ್ನು ಸೇವನೆ ಮಾಡುವುದು ಹೇಗೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಬರಬಹುದು.?
ಇದನ್ನು ಸೂಪ್ ಅಥವಾ ಸಲಾಡ್ ರೂಪದಲ್ಲಿ ಸೇವಿಸಬಹು, ತರಕಾರಿಗಳೊಂದಿಗೆ ಫ್ರೈ ಮಾಡಿ ಅಥವಾ ರೋಸ್ಟ್ ಮಾಡಿಕೊಂಡು ಇದನ್ನು ಸೇವಿಸಬಹುದು. ಇದನ್ನು ಅಧಿಕವಾಗಿ ಸೇವಿಸುವುದು ಒಳ್ಳೆಯದಲ್ಲ, ಅತಿಯಾದರೆ ಅಮೃತವು ವಿಷ ಅನ್ನೋದು ನೆನಪಿರಲಿ.

LEAVE A REPLY

Please enter your comment!
Please enter your name here