ದೇಹದ ಬೊಜ್ಜನ್ನು ನಿವಾರಿಸಿಕೊಳ್ಳಲು ಬಹಳಷ್ಟು ಕಷ್ಟಪಡುತ್ತೇವೆ ಆದ್ರೆ ಕೆಲವೊಮ್ಮೆ ಇದಕ್ಕೆ ಪರಿಹಾರ ಸಿಗದೇ ಇರಬಹುದು ಹಾಗಾಗಿ ಶೇಂಗಾವನ್ನು ಹೀಗೆ ಬಳಸಿ ನೋಡಿ ದೇಹದ ತೂಕ ಬಹುಬೇಗನೆ ಕಡಿಮೆಯಾಗುತ್ತದೆ. ಹೇಗೆ ಅನ್ನೋದನ್ನ ಮುಂದೆ ನೋಡಿ..

ಬಡವರ ಬಾದಾಮಿ ಎಂಬುದಾಗಿ ಕರೆಯಲ್ಪಡುವ ಶೇಂಗಾ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಬಲ್ಲದು, ದೇಹದ ಬೊಜ್ಜು ನಿವಾರಣೆಯನ್ನು ಹೇಗೆ ಮಾಡಿಕೊಳ್ಳಬಹುದು ಹಾಗು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ನಿಮಗೆ ತಿಳಿಸುತ್ತೇವೆ ಬನ್ನಿ.

ಹಿಂದಿನ ದಿನ ರಾತ್ರಿ ಶೇಂಗಾವನ್ನು ನೆನೆಸಿಟ್ಟುಕೊಳ್ಳಬೇಕು. (ಬೇಯಿಸಿದ ಶೇಂಗಾ ಅದರೂ ತೆಗೆದುಕೊಳ್ಳಬಹುದು.) ಇದಕ್ಕೆ ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಈರುಳ್ಳಿ, ಕಾಯಿತುರಿ, ನಿಂಬೆರಸ, ಸ್ವಲ್ಪ ಕಾಳು ಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಲಾಡ್ ತಯಾರು.

ಈ ಸಲಾಡ್ ಸೇವನೆಯಿಂದ ಸಂತೃಪ್ತ ಭಾವನೆ ಉಂಟಾಗುತ್ತದೆ. ಕೆಟ್ಟ ಕೊಬ್ಬನ್ನು ಕರಗಿಸಿ ಒಳ್ಳೆಯ ಕೊಬ್ಬನ್ನು ದೇಹದಲ್ಲಿ ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಆಹಾರದ ಮೊದಲು ಈ ಸಲಾಡ್ ಸೇವಿಸುತ್ತ ಬಂದರೆ ತೂಕವನ್ನು ಬಹುಬೇಗನೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ ಹಾಗು ಪ್ರತಿದಿನ ಅಪ್ಡೇಟ್ ಸುದ್ದಿಗಳನ್ನು ಪಡೆಯಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here