ಕೆಲವರು ಆರೋಗ್ಯದ ಬಗ್ಗೆ ಕಾಳಜಿ ಇರುವಂತವರು ಪ್ರತಿದಿನ ಹಸಿ ಕ್ಯಾರೆಟ್, ಹಸಿ ಸೌತೆಕಾಯಿ ಇವುಗಳನ್ನು ಸೇವನೆ ಮಾಡುತ್ತಿರುತ್ತಾರೆ, ಇದರಿಂದ ದೇಹಕ್ಕೆ ಒಳ್ಳೆಯ ಉಪಯೋಗವಿದೆ ಇದರಲ್ಲಿ ಹಲವು ಆರೋಗ್ಯಕಾರಿ ಪೋಷಕಾಂಶಗಳಿದ್ದು ದೇಹಕ್ಕೆ ಬೇಕಾಗುವ ಪ್ರೊಟೀನ್ ದೊರೆಯುತ್ತದೆ.

ಹಸಿ ಸೌತೆಕಾಯಿಯನ್ನು ತಿನ್ನೋದ್ರಿಂದ ದೇಹದ ಉಷ್ಣತೆ ಕಡಿಮೆಯಾಗುವುದು, ಹಾಗೂ ಬಾಯಿ ರುಚಿಗೆ ಅಷ್ಟೇ ಅಲ್ಲ ಕಣ್ಣಿನ ಆರೋಗ್ಯಕ್ಕೆ ಸೌಂದರ್ಯಕ್ಕೂ ಹೆಚ್ಚು ಸಹಕಾರಿ. ದೇಹದ ಚರ್ಮಕ್ಕೆ, ದೇಹದ ಮೂಳೆಗಳಿಗೆ ಒಳ್ಳೆಯ ಆರೋಗ್ಯವನ್ನು ಸೌತೆಕಾಯಿ ವೃದ್ಧಿಸುತ್ತದೆ.

ಸೌತೆಕಾಯಿಯಲ್ಲಿ ಮೆದುಳಿನ ನರಗಳನ್ನು ಬಲಪಡಿಸುವ ಸಾಮಥ್ರ್ಯ ಹೊಂದಿರುವುದರಿಂದ ಅರವತ್ತರ ನಂತರ ಕಾಡುವ ಮರೆವಿನ ಕಾಯಿಲೆ ಅಲ್ಜಿಮೈರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸೌತೆಯಲ್ಲಿರುವ ಎರಿಪ್ಸಿನ್ ಎಂಬ ಕಿಣ್ವ ಹೊಟ್ಟೆಯಲ್ಲಿರುವ ಲಾಡಿ ಹುಳುಗಳನ್ನು ಸಾಯಿಸುವ ಶಕ್ತಿ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸುವ ಶಕ್ತಿ ಇದರಲ್ಲಿದ್ದು, ಹೊಟ್ಟೆಯ ಪದರಗಳಿಗೆ ತಂಪು ನೀಡುವುದರಿಂದ ಹೊಟ್ಟೆಯುರಿ-ಹುಣ್ಣು ಕ್ರಮೇಣ ಕಡಿಮೆಯಾಗುತ್ತದೆ.

ರಕ್ತದೊತ್ತಡ ಕಾಪಾಡುವ ಶಕ್ತಿ ಇದರಲ್ಲಿದೆ. ಹಸಿಯಾಗಿ ನಿತ್ಯ ಸೇವಿಸುವುದರಿಂದ ಹಸಿವು ಹೆಚ್ಚುತ್ತದೆ. ಗ್ಯಾಸ್ ಸಮಸ್ಯೆಯೂ ಕಡಿಮೆಯಾಗುತ್ತದೆ. ರಾತ್ರಿ ವೇಳೆ ತಲೆನೋವು ಕಾಡುತ್ತಿದ್ದರೆ ಸೌತೆಕಾಯಿ ತಿಂದು ಮಲಗಿದರೆ ಒಳ್ಳೆಯದು. ಕ್ಯಾನ್ಸರ್‍ಗೆ ಕಾರಣವಾಗುವ ಜೀವಕೋಶಗಳನ್ನು ಕೊಲ್ಲುವ ಶಕ್ತಿ ಸೌತೆಕಾಯಿಗಿರುವುದರಿಂದ ಇದು ಕನಿಷ್ಟ ಎಂಟು ತರಹದ ಕ್ಯಾನ್ಸರ್ ಸಾಧ್ಯತೆಯನ್ನು ತಡೆಗಟ್ಟುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಸೌತೆಕಾಯಿಯನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಒಳ್ಳೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಬೇಸಿಗೆಕಾಲದಲ್ಲಿ ಪ್ರತಿದಿನ ಸೌತೆಯನ್ನು ತಿನ್ನೋದ್ರಿಂದ ಒಳ್ಳೆಯ ಪ್ರಯೋಜನವಿದೆ.

LEAVE A REPLY

Please enter your comment!
Please enter your name here