ಕಳೆದ 10 ದಿನಗಳಿಂದ ಕರ್ನಾಕಟದಲ್ಲಿ ಮಳೆ ಹೆಚ್ಚಾಗಿದ್ದು, ಉತ್ತರ ದರ್ಕಾನಾಟಕ ಹಾಗು ಕರ್ವಾಲಿ ಪ್ರದೇಶಗಳು ಪ್ರವಾಹಕ್ಕೆ ಸುಲುಕಿ ಜನರ ಪರಿಸ್ಥಿತಿ ತುಂಬಾನೇ ಕಷ್ಟಕರವಾಗಿದೆ. ಈ ವೇಳೆಯಲ್ಲಿ ಜರನ ರಕ್ಷಣೆಗಾಗಿ ಯೋಧರು ಬಂದಿದ್ದು ಹೆಚ್ಚಿನ ಅನುಕೂಲವಾಗಿದೆ ಅಹ್ಗೂ ಸ್ಥಳೀಯ ಯುವಕರ ಕಾರ್ಯ ವೈಖರಿಯಿಂದ ಉತ್ತರ ಕರ್ನಾಟಕದಲ್ಲಿ ಹಲವು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರವಾಹದಿಂದ ಸತತ ಆರು ದಿನಗಳಿಂದ ಗ್ರಾಮದಲ್ಲೇ ಸಿಲುಕಿಕೊಂಡಿದ್ದ ೧೦ ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡುವುದರ ಜತೆಗೆ ೪ ರೋಗಿಗಳನ್ನು ೫ ಕಿ,ಮೀ ದೂರದವರೆಗೆ ಹೊತ್ತು ತಂದು ರಕ್ಷಣೆ ಮಾಡಿದ್ದಾರೆ ಸೇನಾ ಪಡೆ. ಈ ಘಟನೆ ನಡೆದಿರುವುದು ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿತ್ತು. ಹೀಗಾಗಿ ಮನೆಯಿಂದ ಸುರಕ್ಷಿತ ಪ್ರದೇಶಗಳಿಗೆ ಹೋಗಲು ಆಗದೇ ಕಂಗಾಲಾಗಿದ್ದರು. ಕಳೆದ 6 ದಿನಗಳಿಂದ 10ಕ್ಕೂ ಮಂದಿ ಗ್ರಾಮಸ್ಥರು ಸಂಕಷ್ಟದಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬೆಳಿಗ್ಗೆ 7.30ರಿಂದ ಯೋಧರು ಕಾರ್ಯಾಚರಣೆ ನಡೆಸಲು ಆರಂಭಿಸಿದರು. ಕಷ್ಟಪಟ್ಟು 10ಕ್ಕೂ ಹೆಚ್ಚು ಜನರನ್ನ ಸೇನಾಪಡೆ ರಕ್ಷಣೆ ಮಾಡಿದ್ದು, ಅವರೊಂದಿಗೆ ಸ್ಥಳೀಯ ಯುವಕರು ಕೂಡ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.

LEAVE A REPLY

Please enter your comment!
Please enter your name here