ಸಾಧಿಸುವವರಿಗೆ ಯಾವ ವಯಸ್ಸು ಮುಖ್ಯವಲ್ಲ ಅನ್ನೋದನ್ನ ಈ 106 ವರ್ಷದ ಅಜ್ಜಿ ತಿಳಿಸಿದ್ದಾರೆ, ಒಬ್ಬ ವ್ಯಕ್ತಿಗೆ ಶ್ರಮ ಹಾಗು ಶ್ರದ್ದೆ ಇದ್ದರೆ ತಾನು ಮಾಡುವಂತ ಕೆಲಸದಲ್ಲಿ ಪ್ರಗತಿಯನ್ನು ಕಾಣಬಲ್ಲ. ಈ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಅಷ್ಟೇ ಅಲ್ದೆ ನಮ್ಮ ದೇಶದ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸುತ್ತಿದ್ದಾರೆ ಅದು ಹೇಗೆ ಅನ್ನೋದನ್ನ ಮುಂದೆ ನೋಡಿ.

ಹೆಸರು ಮಸ್ತನಮ್ಮಾ ಎಂಬುದಾಗಿ ಆಂಧ್ರ ಪ್ರದೇಶದವರು ಇವರು ದೇಶಿಯ ಅಡುಗೆ ಶೈಲಿಯಲ್ಲಿ ಅಡುಗೆಗಳನ್ನು ಮಾಡಿ ಯೌಟ್ಯೂಬ್ ನಲ್ಲಿ ವಿಡಿಯೋಗಳನ್ನು ಹಾಕುತ್ತಾರೆ, ಇವರು ಮಾಡುವಂತ ಸ್ವಾದಿಷ್ಟಕರ ಆಹಾರ ತಯಾರಿಸುವ ವಿಧಾನ ವಿಶಿಷ್ಟವಾಗಿದ್ದು ಇದನ್ನು ಭಾರತೀಯರು ಅಲ್ಲದೆ ದೇಶ ವಿದೇಶದವರು ಇವರ ವಿಡಿಯೋ ಹಾಗು ಇವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇವರು ತಯಾರಿಸುವಂತ ದೇಶೀಯ ಸಸ್ಯಾಹಾರ ಹಾಗು ಮಾಂಸಾಹಾರ ರೆಸಿಪಿಗಳನ್ನು ಯೌಟ್ಯೂಬ್ ಚಾನಲ್ Country Foods ಹೆಸರಿನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ವಿಶೇಷತೆ ಏನೆಂದರೆ ಅತಿ ಹಿರಿಯ ವಯಸ್ಸಿನವರು ಇಂತಹ ಕೆಲಸಕ್ಕೆ ಮುಂದಾಗಿರೋದು ನಿಜಕ್ಕೂ ಬೇರೆ ವಯಸ್ಸಿನವರಿಗೂ ಇವರು ಮಾದರಿ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಇವರು ಯೂ ಟ್ಯೂಬ್ ಸ್ಟಾರ್ ಮಾತ್ರವಲ್ಲದೇ, ಭಾರತದ ಪಾರಂಪರಿಕ ಪದ್ಧತಿಯನ್ನು ವಿಶ್ವಕ್ಕೇ ಪರಿಚಯಿಸುತ್ತಿರುವ, ಈ ಮಣ್ಣಿನ ಹೆಮ್ಮೆಯ ನಾರಿ ಎನ್ನಬಹುದು. ಇಷ್ಟೇ ಅಲ್ಲದೇ ತಮ್ಮಿಂದ ಇನ್ನೇನು ಸಾಧ್ಯವಿಲ್ಲ ಎಂದು ಜೀವನದಲ್ಲಿ ಹತಾಶರಾಗಿರುವ ಪ್ರತಿಯೊಬ್ಬರಿಗೂ ತಾವು ಸಾಧಿಸಬಲ್ಲೆವು ಎಂದು ವಿಶ್ವಾಸ ತುಂಬುವ ಸ್ಪೂರ್ತಿ ಇವರಿಂದ ಸಿಕ್ಕೇ ಸಿಗುತ್ತದೆ.

LEAVE A REPLY

Please enter your comment!
Please enter your name here